ಕಿಂಗ್ ಹೆನ್ರಿ

 1592-1669. ಲಂಡನಿನ ಬಿಷಪನೊಬ್ಬನ ಮಗ. ವೆಸ್ಟ್‍ಮಿನಿ ಸ್ಟರ್ ಶಾಲೆ ಮತ್ತು ಆಕ್ಸ್‍ಫರ್ಡ್‍ಗಳಲ್ಲಿ ವಿದ್ಯಾರ್ಜನೆ ಮಾಡಿ ಚಿಚೆಸ್ಟರಿನ ಮಠಾಧಿಪತಿಯಾದ (1642). ಅರಸು ಮನೆತನದ ಅನೇಕ ವ್ಯಕ್ತಿಗಳನ್ನೂ ತನ್ನ ಆಪ್ತಮಿತ್ರರನ್ನೂ (ಮುಖ್ಯವಾಗಿ ಡನ್, ಐಸ್ಯಾಕ್ ವಾಲ್ಟನ್, ಟಿನ್ ಜಾನ್ಸನ್) ಕುರಿತು ಈತ ಚರಮಗೀತಗಳನ್ನೂ ಬರೆದಿದ್ದಾನೆ. ಕವಿ ತನ್ನನ್ನೇ ಕುರಿತು ಬರೆದುಕೊಂಡ ಚರಮಗೀತೆ 1663ರಲ್ಲಿ ಹೊರಬಂದ ಇವನ ಕವನ ಸಂಗ್ರಹದಲ್ಲಿದೆ.    

   (ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ